ನಲವತ್ತ ಮೂರು
ಹರಿ ಕಾಯೋ ಕರುಣಾಕರ||ಪ||
ನರಹರಿ ಪರಮಾತ್ಮ ಶರಣ ಜನಪಾಲ||ಅ.ಪ||
ಆಡಂಬರದಲಿ |
ಮಡದಿಮಕ್ಕಳಕೂಡಿ|
ಸಡಗರದಲಿರುತಿರಲು |
ಕಡೆಗಣಿಸಿದೆನೈ|
ಪೊಡಮಡದೆ ನಿನ್ನಡಿಗೆ |
ಬಡತನವು ಬರಲೆಡೆಗೆ|
ಗಾಡಿಕಾರನ ಬೇಡಿ |
ತೋಡಿಕೊಂಬೆ ಪರಿಯಲಿ||ಹರಿ||
ಸಾವಕಾಶದಲಿ |
ಭವಭಾಂಡದಲಿ ಬೆಂದು|
ಅವಮಾನವಗೊಂಡೆನೆ |
ತವಸರಸಿಯೊಳಗೆ|
ಚಿವುಟದಲೆನಗೆ ನಿನ್ನ |
ಚವಿಯನ್ನು ತೋರುತಲಿ|
ಕಾವುದೆನ್ನ ನಿರತದಿ |
ಭವಮೋಕ್ಷದಾಯಕ||ಹರಿ||
ಬಿತ್ತಿದೆ ಭಕ್ತಿಯ |
ಹತ್ತು ನಾಮವ ನುಡಿದು|
ಉತ್ತು ಹದಮಾಡಿ-|
ಯಿತ್ತು ದೇಹದಂಡನೆ|
ಮಾತರೀಶ ವಿಠಲನ |
ಸ್ತುತಿಯ ಮಾಡುತಿರಲು|
ಮತ್ತಿಲ್ಲ ಯಮಭಾದೆ |
ಸತ್ತುಹೋಗಲು ಮುಕ್ತಿ ||ಹರಿ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ