ಐವತ್ತು

 

ಯಾರಿವನೆಂದು ಪೇಳಿ ಒಗಟೊಂದ ಕೇಳುವೆನು|

ಸರಿಯುತ್ತರವ ನೀಡುವುದು ಬಲ್ಲವರೆಲ್ಲರು||ಪ||


ಗೊಲ್ಲ ಕುಲದೊಳು ಪುಟ್ಟಿದನಂತ

ಬಾಲ ಲೀಲೆಯ ತೋರಿದನಂತೆ|

ಒಳ್ಳೆ ಬೆಣ್ಣೆಯ ಮೆದ್ದಿಹನಂತೆ|

ಮಲ್ಲ ಖಳರನು ಕೊಂದಿಹನಂತೆ|

ಎಲ್ಲ ಭಕುತರ ಪೊರೆಯುವನಂತೆ||ಯಾರಿವ||


ನವಿಲುಗರಿಯನ್ನಿಟ್ಟ ಮುಕುಟನ|

ಹಾವಿನ ತಲೆಯ ಮೆಟ್ಟಿದಾತನ|

ಭುವನವೀರೇಳು ಕಾಯ್ದಾತನ|

ಮಾವನೆಂಬನ ಮುಕ್ಕಿ ಬಿಸುಟನ|

ಮಾನಿನಿಯರ ತಾ ಸಲಹಿದವನ||ಯಾರಿವ||


ಮಾಯ ರಕ್ಕಸಿಯ ಮೊಲೆಯಗುಡಿದು|

ತಾಯಿಗೆ ಬಾಯಲಿ ಜಗವದೋರಿ|

ಮಾಯ ಕುವಾದಿಗಳ ಸೋಲಿಸಿದ|

ರಾಯ ಮಧ್ವಗೊಲಿದು ಬಂದ ಭವ|

ಭಯ ನಾಶಿ ಮಾತರೀಶ ವಿಠಲ||ಯಾರಿವ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು