ಹನ್ನೆರಡು
ಕನ್ನವಿಕ್ಕಲು ಬಂದೆ|
ನಿನ್ನ ಭಕ್ತರ ಮನೆಗಿಂದು||ಪ||
ಘನ್ನ ರತ್ನಗಳೆಲ್ಲ|
ಎನ್ನಯ ವಶವಾಯಿತಯ್ಯ||ಅ.ಪ||
ಆಡುತಲಿ ಚೆನ್ನುಡಿಯ|
ಓಡಾಡುವ ಭಕ್ತರ|
ಬಡತನವೆಂಬ ಹೊನ್ನ|
ಒಡವೆ ಎನ್ನ ವಶವಾಯಿತು ಹರಿಯೆ||ಕನ್ನ||
ಯುಕ್ತದಾ ಬುದ್ದಿಯಲಿ|
ಶಕ್ತರಾಗಿಹರೆಲ್ಲ|
ಮುಕ್ತಿಯ ಬೇಡುತಿಹರ|
ಭಕ್ತಿಯೆಂಬ ರತ್ನ ವಶವಾಯಿತು||ಕನ್ನ||
ಜಪತಪ ಮಾಡುತಲಿ|
ಅಪರಿಮಿತ ಭಕ್ತಿಯಲಿ|
ಒಪ್ಪಿ ನಿನಗೆ ಮಾಡುವ|
ಉಪವಾಸದ ಹವಳ ವಶವಾಯಿತು||ಕನ್ನ||
ಓದುವರು ಪುರಾಣವ|
ವಾದಿಪರು ಶ್ರೀ ಹರಿಯ|
ಪಾದಸೇವೆಯ ಕನಕ|
ಕದ್ದು ತರಲೆನ್ನಯ ವಶವಾಯಿತು||ಕನ್ನ||
ಘನ್ನ ಮಹಿಮನೆ ಕೇಳು|
ಭಿನ್ನಪವ ಮಾಡುವೆನು|
ಮನ್ನಿಸಬೇಕು ಎನ್ನ|
ಚೆನ್ನ ಮಾತರೀಶ ವಿಠಲನ ದಯೆ||ಕನ್ನ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ